ಶುಕ್ರವಾರ, ಏಪ್ರಿಲ್ 11, 2008

ಅವಳು

ಕಿಟಕಿಯ ಪಕ್ಕ ಕೂತು, ಹಾಗೆ ಸ್ವಲ್ಪ ಎಡಕ್ಕೆ ಬಾಗಿ,ಗಾಜಿಗೆ ತಲೆ ಒರಗಿಸಿ, ತನ್ನ ತೆಳುವಾದ ಓಣಿಯನ್ನು ಕಣ್ಣು - ಕೂದಲು ಮರೆಯಾಗುವಂತೆ ಹೊದ್ದು ಮಲಗಿದ್ದ ಆ ಸುಂದರಿಯನ್ನು ಎಷ್ಟು ನೋಡಿದರೂ ನೋಡಬೇಕೆನಿಸುತಿತ್ತು. ಕಿಟಕಿಯಿಂದ ಬೀಳುತ್ತಿದ್ದ ಬಿಸಿಲು ಅವಳ ಓಣಿಗೂ ಮುಖಕ್ಕೂ ಒಂದು ರೀತಿಯ ಹಿತಮಿತವಾದ ಮೆರುಗು ತಂದಿತ್ತು. ಕೂದಲು ನಮ್ಮಮ್ಮ ಎಣ್ಣೆ ಹಚ್ಚಿ ಬಾಚಿದರೆ ಹೇಗೋ ಹಾಗೆ ಅವಳ ಮಾತು ಕೇಳಿತ್ತು. ಮುಖದ ಮೇಲೆ ಯಾವ ಕಂಪನಿಯ ಯಾವ ಪದಾರ್ಥವೂ ಕಾಣದಿದ್ದುದು, ಯಾವುದೋ ಸ್ವಪ್ನ ಸುಂದರಿಯೆಂಬ ಭ್ರಮೆ ಮೂಡಿಸುತ್ತಿತ್ತು. ಭೂಲೋಕದ ಅರಿವೇ ಇಲ್ಲದಂತೆ ತೋರುತ್ತಿತ್ತು, ನಿದ್ದೆ ಮಾಡುತ್ತಿದ್ದ ಮುಖದ ಭಾವನೆ. ಇಂತಹ ಹುಡುಗಿಯರನ್ನು ನೋಡಿ ಎಷ್ಟು ದಿನವಾಯ್ತಪ್ಪ ಎಂದುಕೊಂಡು ಸುತ್ತ ಕಣ್ಣು ಹರಿಸಿದೆ. ಬರೀ ಪಾಂಡ್ಸು, ಎಲ್ 18, ಲ್ಯಾಕ್ಟೋಕ್ಯಾಲಮೈನ್ಗಳೇ ಕಣ್ಣಿಗೆ ರಾಚಿ ರೆಪ್ಪೆ ಮುಚ್ಚುವಂತಾಯಿತು. ಮತ್ತೆ ಆ ಹುಡುಗಿಯ ಕಡೆಗೆ ಮುಖ ತಿರುಗಿಸಿದೆ, ಸಂತೋಷವಾಯಿತು!

ಟೌನ್ ಹಾಲ್ ಬಸ್ಟಾಪು ಬಂದಿದ್ದೆ ಎಲ್ಲರು ದಡಬಡನೆ ಇಳಿಯತೊಡಗಿದ್ದರು. ಆ ಹುಡುಗಿಯ ಪಕ್ಕದಲ್ಲೆ ಸೀಟು ಸಿಕ್ಕರೆ ಚಂದ ಎಂದುಕೊಂಡೆ,ಸಿಕ್ಕೇಬಿಟ್ಟಿತು! ಗಾಡಿ ಮುಂದಿನ ಸ್ಟಾಪಿನ ಕಡೆಗೆ ಹೋಗತೊಡಗಿದ್ದೆ ತಡ, ಆ ಸುಂದರಿಗೆ ದಿಢೀರನೆ ಎಚ್ಚರವಾಯಿತು. ಹಿಂದಿನ ಜನ್ಮದ ನೆನಪಿನಲ್ಲಿ ಕಳೆದುಹೋಗಿದ್ದ ಹೆಣ್ಣಿಗೆ ಈ ಜನ್ಮದ ನೆನಪು ಮರುಕಳಿಸಿ ಕರ್ತವ್ಯ ಪ್ರಜ್ನೆ (ಕ್ಷಮಿಸಿ ಅಕ್ಷರ ತಪ್ಪಾಗಿದೆ)ಎಚ್ಚೆತ್ತುಗೊಂಡಂತೆ.

ನೋಡುನೋಡುತ್ತಿದ್ದಂತೆ ಅವಳ ವ್ಯಾನಿಟಿ ಬ್ಯಾಗಿನಿಂದ ಒಂದೊಂದೆ ಸಾಮಾನು ಹೊರಗೆ ಬರಲಾರಂಭಿಸಿತು. ಮಾತುಕೇಳಿ ಕೂತಿದ್ದ ಕೂದಲು ಅವಳು ಕೈಬೆರಳಾಡಿಸುತ್ತಿದ್ದಂತೆ ನೆಗರಿ ನಿಂತುಕೊಂಡಿತು.ತುಟಿಗೆ ಕೆಂಪು ಹರಡಿತು.ಮುಖಕ್ಕೂ ಬೂದಿ ಬಳಕೊಂಡಾಯಿತು. ರಿಂಗಣಿಸಿದ ಫೋನನ್ನು ತೆಗೆದು ಉತ್ತರಿಸಿದಳು - "ಯಾ, ಯಾ ,ಐ ಯಾಮ್ ಗೆಟಿಂಗ್ ಡೌನ್ ಆರ್ ಯು ದೇರ್? ಓಕೆ ದೆನ್". ತನ್ನ ತೆಳು ದುಪ್ಪಟ್ಟಾವನ್ನು ಮಡಚಿ ಬ್ಯಾಗಲ್ಲಿರಿಸಿ,ಚಿಕ್ಕ ಟಾಪನ್ನು ಸರಿ ಮಾಡಿಕೊಂಡು ಕೆಳಕ್ಕಿಳಿದಳು. ನಾನು ಅವಾಕ್ಕದೆ.......

16 ಕಾಮೆಂಟ್‌ಗಳು:

  1. ನನ್ನ ವೊಕ್ಯಾಬುಲರಿ! ತುಂಬಾ ಥ್ಯಾಂಕ್ಸ್ ರೀ ಈ ಥರ ಎಲ್ಲಾ ಹೊಗಳಿದಕ್ಕೆ....

    ಪ್ರತ್ಯುತ್ತರಅಳಿಸಿ
  2. ಆಟೋರಾಣಿಯವರಿಗೆ ನಮಸ್ತೆ,

    ಯಾರದೋ ಬ್ಲಾಗಿನಲ್ಲಿ ನಿಮ್ಮ ಕಮೆಂಟು ನೋಡಿ ನಿಮ್ಮ ಬ್ಲಾಗಿಗೆ ಬಂದೆ. ಈ "ಅವಳು" ಬ್ಲಾಗು ಒಮ್ಮೆ ಓದಿದಾಗ ಅರ್ಥಾಗಲಿಲ್ಲ. ಮತ್ತೊಮ್ಮೆ ಓದಿದಾಗ ಅರ್ಥಾಯಿತು :)

    ಅಂದಹಾಗೆ, ನೀವು "ಆಟೋರಾಣಿ" ಅಂತ ಹೆಸರಿಟ್ಟುಕೊಂಡಿರುವುದ್ಯಾಕೆ?

    ಪ್ರತ್ಯುತ್ತರಅಳಿಸಿ
  3. ವಿಕಾಸ್ ಅವರೆ ಅದರ ಅರ್ಥ ಸ್ವಲ್ಪ ನನಗೂ ಹೇಳಿ.....

    ನಿಜ ಹೇಳಿಬಿಡ್ತೀನಿ, ನಾನು ಅದನ್ನು ಯಾವ ಉದ್ದೇಶದಿಂದಲೂ ಬರೆದಿದ್ದಲ್ಲ. ಸುಮ್ಮನ್ನೆಬಸ್ಸಿನಲಿ ಒಂದು ದಿನ ನಡೆದದನ್ನ ಬಟ್ಟಿ ಇಳಿಸಿದ್ದೇನೆ ಅಷ್ಟೆ.
    ಆದರೂ ಇದನು ಓದಿದಾಗ ನಿಮಗೇನನ್ನಿಸಿತು, ಹೇಳಿದರೆ ಚೆನ್ನಾಗಿತ್ತು.
    ಹಾಗೆ ನಾನು ಆ ಹೆಸರು ಇಟ್ಟುಕೊಂಡಿಲ್ಲ, ನನ್ನ ಸ್ನೇಹಿತರು ಇಟ್ಟಿದ್ದು.

    ಪ್ರತ್ಯುತ್ತರಅಳಿಸಿ
  4. ಅರ್ಥಹೇಳೋದೇನಿದೆ..! ನಾನು ಮೊದಲು ಸರಿಯಾಗಿ ಓದ್ಲಿಲ್ಲ ಅದ್ಕೇ ಅರ್ಥಾಗ್ಲಿಲ್ಲ. ಆಮೆಲೆ ನಿಧಾನಕ್ಕೆ ಓದಿದೆ ಅರ್ಥಾಯ್ತು ಅಂತ ಹೇಳಿದ್ದು ಅಷ್ಟೆ. :)

    ಅದೇ, ನಿಮ್ಮ ಸ್ನೇಹಿತರು ಆ ಹೆಸ್ರು ಯಾಕಿಟ್ರೂಂತ? ನೀವು ಆಟೋದಲ್ಲೇ ಓಡಾಡ್ತಿದ್ರಾ ಬರಿ ಅಥವಾ ಆಟೋ ಓಡಿಸ್ತಿದ್ರ..ಏನ್ ಕತೆ ಅಂತ? :)

    ಪ್ರತ್ಯುತ್ತರಅಳಿಸಿ
  5. Dear Blogger,

    On the occasion of 8th year celebration of Kannada saahithya. com we are arranging one day seminar at Christ college.

    As seats are limited interested participants are requested to register at below link.

    Please note Registration is compulsory to attend the seminar.

    If time permits informal bloggers meet will be held at the same venue after the seminar.

    For further details and registration click on below link.

    http://saadhaara.com/events/index/english

    http://saadhaara.com/events/index/kannada


    Please do come and forward the same to your like minded friends.

    ಪ್ರತ್ಯುತ್ತರಅಳಿಸಿ
  6. nim snehitege naanu modalu ondashtu prashne kelidde avanna approve maadilla, aamele mattondu kalisidanna approve maadi naanu kelbaaradanna kelde anno haage project maadidaare.. aa pattakke male chauvanism annodu bere .. adakke ee thara comment madideeni approve maadtaaro bidtaaro nodabeku..

    english alli maatadu bitre greataa?? :-) sakkath attitude itkondideera... keep it up...
    ishtudda baredidnalla adanna yaake approve maadilla? meter off aayta aa prashnegalige uttarisokke.. seeta maate andiddu henanna keelaagi kaanokalla. mane tumba hennu devategala photo/vigraha pooje maadodu tuliyokke alla bhakti bhaavadinda. adralli gottagutte eshtu maryaade ide anta hinduismnalli. ettige jvara bandre emmege bare haakidrante... prashne mukhya kanri nan identity katkondu enu maadkoteera?? uttariso dhairya irbeku ashte. kaltkolli. nam president mahile, amma mahile, hendati mahile, UPA sarkaara hinde irodu mahile, innu tulitidaare andre nim agnaana kondaadabeku.

    ಪ್ರತ್ಯುತ್ತರಅಳಿಸಿ
  7. MR. @#$%^^&

    ugarinalli hogodakke kodali tagondru anta gaade. nanagenoo... nanna snehiteginta nimage attitude problem ide anta kanatte. ondu sari beda anda mele nivu tilokondu bidi. ondu vele avaru heliddee tappagiddare, sari madabeku anndokke naavu neevu devaralla.
    innondu matu helibidtini.. nimma yava kamentannu avaru hedari haakade iddiddalla. avara blognalli enu haakabeku, enu haakabaradu annodu avara icche.
    attu karedu outana hakisikollodu yaake?
    dayavittu nanna bloginalli e vishayada bagge matanadabedi..

    neevu enadaru baredare adanna nammondige hanchikolli. illavadare summaniri.
    naalku jana hosabaru seri kalibeke horatu i riti obbarigobbaru mannu erachuvudalla.

    ಪ್ರತ್ಯುತ್ತರಅಳಿಸಿ
  8. ಅವಳು ನಿಜವಾಗಿಯೂ ನೀನು ಸಾಹಿತ್ಯದ ವಿದ್ಯಾರ್ಥಿನಿ ಅನ್ನುವುದನ್ನು ತೋರಿಸುವ ಬರವಣಿಗೆ. ಕವಿತೆಯ ಗುಣವುಳ್ಳ ಗದ್ಯ.

    ಇಂತಹ ಕಲಾತ್ಮಕ ಬರವಣಿಗೆ ಹೆಚ್ಚಾಗಿ ಬರಲಿ

    ಪ್ರತ್ಯುತ್ತರಅಳಿಸಿ
  9. ಅದಕ್ಕೆ ಹೇಳೋದು ಸಾರ್, ದೂರದ ಬೆಟ್ಟ ನುಣ್ಣಗೆ ಹತ್ತಿರ ಹೋಗಬೀಡಿ, ಚೆನ್ನಾಗಿದೆ.
    ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
    hhtp://chaayakannadi.blogspot.com

    ಶಿವು.ಕೆ.

    ಪ್ರತ್ಯುತ್ತರಅಳಿಸಿ