ಭಾನುವಾರ, ಸೆಪ್ಟೆಂಬರ್ 28, 2014

ಆಂಬುಲೆನ್ಸ್


ನವ ನಾಗರಿಕನ ಸೃಷ್ಟಿ.

ನವ ನವ ಜ್ಞಾನವ, ತಂತ್ರ ಜ್ಞಾನವ,
ಅಳೆದೂ ಸುರಿದೂ, ಕಲೆಸೀ ಬೆರೆಸೀ,
ಹಗಲನು ದುಡಿಸಿ, ರಾತ್ರಿಯ ಸವೆಸಿ
ಇಲ್ಲಿದೆ ನೋಡಿ, ಒಂದೆಡೆ ಸೇರಿ,
ಈತನ ಜ್ಞಾನ ಸಮಷ್ಟಿ!

ಓಹೋ! ಇದು ಸಂಜೀವಿನಿ, ಪ್ರಾಣದಾಯಿನಿ
ಮಾನವೀಯತೆಯ ಸಂಕೇತ
ಓಡುತ ಬಂದರೆ ಪಕ್ಕಕ್ಕೆ ಸರಿವರು,
"ಬಿಡಿ, ಬಿಡಿ, ಆಂಬುಲೆನ್ಸ್ ಬರ್ತಿದೆ,
ನಮ್ ನಿಮ್ ಎಲ್ಲರ ಕರ್ತವ್ಯ!"

            ------

ಹೌದೇ? ನಿಜವೇ? ನಾನೊಂದಿರಿ ವರವೇ?
ಲೆಕ್ಕಕೆ ಸಿಗದ, ಕಂಡು ಮುಗಿಯದ,
ಭೂಮಿಯ ಒಡಲಿಗೆ ನಾ ಬೇಕೆ?
ಜಾಗ ಬಿಡಿ! ಜಾಗ ಬಿಡಿ! ಜಾಗ ಬಿಡಿ! ಜಾಗ ಬಿಡಿ!
ಕೂಗುವುದೊಂದು ಹೆಚ್ಚೆ!!!!

ಹೇ! ನವನೇ! ಎದೆಯುಬ್ಬಿಸಬೇಡ!
ಕೈ ಮುಗಿದು ಜೈಕಾರ ಹಾಕಿಸಿಕೊಳ್ಳಬೇಡ!
ನೀ ಕಾಣ ಬಯಸದ ನಿನ್ನದೇ ಇನ್ನೊಂದು ಮುಖ ನಾನು!