ಶನಿವಾರ, ಜೂನ್ 28, 2014

ಫ್ರಿಜ್ನಲ್ಲಿಟ್ಟರೆ ಕೆಟ್ಟುಹೋಗತ್ತೆ........ :)


ಫ್ರಿಜ್ಜಲ್ಲಿ ಇಟ್ರೆ ಕೆಟ್ಟೋಗತ್ತೆ.....! (ನಾನು ಆಕ್ಚುವಲಿ ಹೇಳಿದ್ದು, ಡೋಂಟ್‍ ಕೀಪ್‍ ಇಟ್‍ ಇನ್‍ ದ ಫ್ರಿಜ್‍!), ಅದೇನಾಯಿತು ಅಂದ್ರೆ ನಾನು ಆಫೀಸಿಗೆ ತೆಗೆದುಕೊಂಡು ಹೋಗುವ ಪುಳಿಯೋಗರೆ ಗೊಜ್ಜನ್ನ ತುಂಬಾ ಫೇಮಸ್‍ ಆಗಿ ಹೋಯ್ತು... ಸರಿ ನನಗೆ ಎಲ್ಲರಿಗೂ ಗೊಜ್ಜು ತೆಗೆದುಕೊಂಡು ಹೋಗಿ ಕೊಡುವ ಎಂಬ ಪರಮಾದ್ಭುತ ಯೋಚನೆ ಹೊಳೆಯಿತು. ಅವರು ಪದೇ ಪದೇ ಕೇಳುತ್ತಿದ್ದರು, 'ಹೌ ಡು ಯು ಡು ದಿಸ್ ಯಾ'?, 'ಕ್ಯಾನ್ ಯು ಶೋ ಅಸ್ ಒನ್ಸ್ ಹಿಯರ್?' ಮುಂತಾಗಿ. ನನಗೇನೂ ಗೊಜ್ಜು ಮಾಡಲು ಬರುವುದಿಲ್ಲ, ಆದರೆ ರೀತಿನೀತಿ ಗೊತ್ತು. ಅದನ್ನು ಒಂದು ಹದಕ್ಕೆ ಸರಿಯಾಗಿ ತರುವ ರೀತಿ ಗೊತ್ತಿಲ್ಲ. ವಿಧಾನವೂ ತುಂಬಾ ಸರಿಯಾಗಿ ಗೊತ್ತು ಎಂದು ಹೇಳಲಾರೆ. ಒಟ್ಟಿನಲ್ಲಿ, ಹುಣಸೇಹಣ್ಣು, ಕಡಲೆಬೀಜ, ಒಣಕೊಬ್ಬರಿ, ಕಡಲೆಕಾಯಿ ಎಣ್ಣೆ ಇಷ್ಟು ಬೇಕು ಎಂದು ಗೊತ್ತಿತ್ತು, ಅಷ್ಟನ್ನು ಕೊಂಡು ತಂದು ಅಮ್ಮನ ಕೈಯಲ್ಲಿ ಮಾಡಿಸಿಕೊಂಡು ತೆಗೆದುಕೊಂಡು ಹೋಗಿ ಕೊಟ್ಟೆ. ಕೊಟ್ಟು ಹೇಳಿದೆ, 'ಡೋಂಟ್‍ ಕೀಪ್‍ ಇಟ್ ಇನ್ ದ ಫ್ರಿಜ್'! ಅರೆ!! ಅವರು ಮತ್ತೆ ಮತ್ತೆ ಕೇಳಿದರು. "ವಾಟ್‍ ಆರ್‍ ಯು ಸೇಯಿಂಗ್‍? ಯೂ ಶುಡ್‍ ಕೀಪ್‍ ಇಟ್‍ ಆರ್‍ ನಾಟ್‍ ಕೀಪ್‍ ಇಟ್‍?" ನಾನು ಮನಸಿನಲ್ಲಿ, "ಇಲ್ಲಮ್ಮ ತಾಯಿ, ಫ್ರಿಜ್‍ನಲ್ಲಿ ಇಡಬೇಡ, ನೀರು ಬಿದ್ರೆ ಹಾಳಾಗುತ್ತೆ! ನಿಮಗೆ ಹೇಗಪ್ಪ ಹೇಳೋದು ಅಂದ್ಕೊಂಡು" ಬಾಯಲ್ಲಿ "ನೋ ನೋ ಬೇಲಾ, ಡೋಂಟ್ ಕೀಪ್‍ ಇಟ್‍ ಇನ್‍ ದ ಫ್ರಿಜ್, ದ ಥಿಂಗ್‍ ಈಸ್‍ ಇಟ್‍ ಶುಡ್‍ ನಾಟ್‍ ಕಮ್‍ ಇನ್ ಕಾಂಟ್ಯಾಕ್ಟ್ ವಿತ್ ವಾಟರ್‍, ಇಟ್‍ ಈಸ್ ಬೀಯಿಂಗ್‍ ಬಾಯಿಲ್ಡ್ ಸೋ ದಟ್‍ ಇಟ್ ಡಸ್‍ ನಾಟ್ ಹ್ಯಾವ್ ಎನಿ ವಾಟರ್ ಕಾಂಟೆಂಟ್‍, ಡೋಂಟ್‍ ವರಿ ಇಟ್‍ ವಿಲ್‍ ಸ್ಟೇ ಆ್ಯಸ್‍ ಲಾಂಗ್‍ ಆ್ಯಸ್‍ ಯೂ ವಾಂಟ್‍" ಎಂದು ಹೇಳಿ ಸಣ್ಣದೊಂದು ನಗೆ ಬೀರಿದೆ. "ಓ ಐ ಸೀ" ಉತ್ತರ ಬಂತು.

ಇಲ್ಲಿಗೀ ಕತೆ ಮುಗಿಯಿತು.

ಮುಗೀಲಿಲ್ಲ! ಇದೆಲ್ಲ ಆಗಿ ಸುಮಾರು ಎರಡು ವರ್ಷಗಳಾಗಿರಬಹುದು, ಆದರೆ, ನನಗೆ ಇನ್ನೂ ಕೊರೆಯತ್ತದೆ, ಅಬ್ಬಾ! ನಾವು ಇಂತಹ ಎಷ್ಟೊಂದು ಮಷಿನ್ನುಗಳ ಮೇಲೆ ಡಿಪೆಂಡ್‍ ಆಗಿಬಿಟ್ಟಿದ್ದೇವೆ! "ಹೊಸ ಹೊಸ ವಿಧಾನ ಬಂದಿರುವಾಗ, ಹಳೆಯದೇಕೆ ಬಳಸುತ್ತೀರಿ?" ಎಂದು ಟೀವಿಲಿ, ಪೇಪರಿನಲ್ಲಿ, ಅಲ್ಲಿ ಇಲ್ಲಿ ನಮ್ಮ ಜ್ಞಾನೇಂದ್ರಿಯಗಳಿಗೆ ಬೀಳುತ್ತಲೆ ಇರುತ್ತವೆ. ಅತಿ ಹೆಚ್ಚು 'ಅಡ್ವಾಸ್ಡ್' ಯಾವುದು ಎಂಬುದರ ಹಿಂದೆ ಬಿದ್ದು ಬಿಟ್ಟಿದ್ದೇವೆ.

ನಮ್ಮ ಉಪ್ಪಿನಕಾಯೇ ಆಗಲಿ, ಮೇಲೆ ಹೇಳುವಂತಹ ಗೊಜ್ಜುಗಳೇ ಆಗಲಿ, ಹಪ್ಪಳ - ಸಂಡಿಗೆಗಳೇ ಆಗಲಿ, ಒಣ ದ್ರಾಕ್ಷಿಯೇ ಆಗಲಿ, ನಮ್ಮ ಪೂರ್ವಜರು ಪ್ರಕೃತಿಯನ್ನು ಎಷ್ಟು ಚೆನ್ನಾಗಿ ತಿಳಿದುಕೊಂಡು ಇದನ್ನೆಲ್ಲಾ ಮಾಡಿಕೊಂಡು ಬಂದಿದ್ದಾರೆ. ನೀರಿನ ಹಾಗೂ ಗಾಳಿಯ ಜೊತೆಗಿನ ವಸ್ತುಗಳ ಒಡನಾಟದ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ! ಅಂದ ಹಾಗೆ, ನಮ್ಮ ಚಪಾತಿಗಳು 'ಆಶೀರ್ವಾದ ಗೋಧಿಹಿಟ್ಟು' ಬರುವ ಮೊದಲೂ ಮೆತ್ತಗಿರುತ್ತಿತ್ತು. ಅದನ್ನು ಪದರ ಪದರವಾಗಿ ಮಾಡಿ, ಗಾಳಿಗೆ ಅವಕಾಶ ಮಾಡಿಕೊಡುವ ರೀತಿ ಎಷ್ಟು ಅದ್ಭುತವಾಗಿದೆ! ಕೆಲವು ಕಡೆ ಚಪಾತಿಯನ್ನು ಗಟ್ಟಿಯಾಗಿ ಮಾಡುತ್ತಾರೆ, ಅದು ಬೇರೆಯೇ ವಿಷಯ ಎಂದುಕೊಳ್ಳುತ್ತೇನೆ. ಅದಕ್ಕೆ ಸ್ಥಳೀಯ ಕಾರಣವೇನಾದರೂ ಇರಬಹುದು ಅನ್ನಿಸುತ್ತೆ ನನಗೆ. ಉಪಯೋಗಕ್ಕಿಂತ 'ಸೈಡ್ ಎಫೆಕ್ಟ್'ಗಳೇ  ಜಾಸ್ತಿಯಾಗಿದ್ದರೂ, ನಮ್ಮ ಪೂರ್ವಜರ ವಿದ್ಯೆ ನಮಗೆ ತಿಳಿಯದೇ ಹೋದದ್ದರಿಂದ, ಜಾಹೀರಾತುಗಳಿಗೆ ತಲೆಬಾಗಿ ಬಂದುದನ್ನು ಸ್ವೀಕರಿಸುತ್ತಿದ್ದೇವೋ ಏನೋ!!!!

ಹೇಗಪ್ಪಾ ಇದರಿಂದ ಹೊರಗೆ ಬರುವುದು!    


2 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಲೇಖನ ಚೆನ್ನಾಗಿದೆ . ಪ್ರಕೃತಿಯಿಂದ ಬಲುದೂರ ಬಂದಾಗಿದೆ ಹಿಂದಿರುಗುವಷ್ಟು ಸಮಯವಿಲ್ಲ ....ಅಪ್ಪಿತಪ್ಪಿ ಸಮಯ ಸಿಕ್ಕಿದರು ಅದನ್ನ fridge ನಲ್ಲಿಟ್ಟು ಮುಂದಕ್ ಬೇಕಾದಿತು ಅಂತ ಕೈಕಟ್ಟಿ ಕೂತಿರ್ತಾರೆ !!! ಏನ್ ಮಾಡೋಣ !? :D

    ಪ್ರತ್ಯುತ್ತರಅಳಿಸಿ