ಶುಕ್ರವಾರ, ಮಾರ್ಚ್ 5, 2010

ಅತಿ ಜಾಣ

ರುಕ್ಮಿಣಿ ಏನು ಮಾಡಿದರೂ ಎದ್ದು ಹೊರಡಲಿಲ್ಲ! ಬಹಳ ದಿನಗಳಾದ್ದರಿಂದ ಆ ಮೂಡ್‌ ಸಹ ಹೋಗಿಬಿಟ್ಟಿದೆ. ಸದ್ಯಕ್ಕೆ ಹಳೆಯದೊಂದು ಕವನ, ನಿಮ್ಮ ಮುಂದೆ...

ಹ್ಞೂ ತಳ್ಳು! ಇನ್ನೊಂದು ಸ್ವಲ್ಪ
ಹ್ಞಾ ಹಾಗೇ! ಪರವಾಗಿಲ್ಲಪ್ಪ

ನಾನು ಅಂದುಕೊಂಡ ಹಾಗೆ ಸಾಗುತ್ತಿದೆ
ಎಲ್ಲಾ, ಈ ಗೋಡೆ ಬಿದ್ದು ಹೋಗಲು,
ಎಷ್ಟು ಲೆಕ್ಕ ಹಾಕಿದ್ದೇನೆ ನಾನು?

ಇಟ್ಟಿಗೆಗಳೆಷ್ಟು? ಮರಳೆಷ್ಟು?
ನೀರೆಷ್ಟು?
ಎತ್ತರ, ಆಳ, ಅಗಲ
ಎಲ್ಲವನ್ನು ಅರಿದು ಕುಡಿದು ಬಿಟ್ಟಿದ್ದೇನೆ...

ಅದರ ಮುಂದೆ ನನ್ನ ಶಕ್ತಿ ಎಷ್ಟು?
ಹೆಂಗಸರಿಗೆಷ್ಟು? ಗಂಡಸರಿಗೆಷ್ಟು?
ತಳ್ಳಲು ಬೇಕಾದ ಶಕ್ತಿಯೆಷ್ಟು?
ದಿನೇ ದಿನೇ ನನ್ನಲ್ಲಿ ಕುಗ್ಗುವ ಶಕ್ತಿಯೆಷ್ಟು?
ಅದನ್ನು ಸರಿಪಡಿಸಲು ಬೇಕಾದ ಆಳುಗಳೆಷ್ಟು?
ಹ್ಞಾ! ಆಯ್ತು. ಈ ವರುಷ ಮೂರು
ಮಕ್ಕಳು! ಇನ್ನು ಈ ಗೋಡೆ
ನಮ್ಮೆಲ್ಲರ ಕೈ ಭಾರಕ್ಕೆ ಅದರಿ ನೆಲಕ್ಕುರುಳುವುದೇ!

ಹ್ಹ ಹ್ಹ ಹ್ಹ

ಬಂದಿದ್ದ ಒಬ್ಬ ಹಾರೆ ಗುದ್ದಲಿ ಹಿಡಿದು
ಗೋಡೆಯನ್ನು ಬೀಳಿಸುತ್ತೇನೆಂದು
ಅಳೆದು ಸುರಿದು ನೋಡಿ ಪರಕಿ ಹೇಳಿಬಿಟ್ಟೆ
ನಿನ್ನ ಬಡಕಲು ಕೊಡಲಿಯೆಲ್ಲಿ? ಈ ದೊಡ್ಡ ಗೋಡೆಯೆಲ್ಲಿ?
ಬಯ್ದು ಓಡಿಸಿಬಿಟ್ಟೆ, ದಡ್ಡನನ್ನ...

ಹ್ಞೂ ತಳ್ಳಿ! ಇನ್ನೊಂದು ಸ್ವಲ್ಪ
ಹ್ಞಾ ಹಾಗೇ! ಇನ್ನೇನು ಬಿದ್ದೇ ಬಿಡುತ್ತದೆ...

9 ಕಾಮೆಂಟ್‌ಗಳು:

  1. ಚೆ೦ದವಾಗಿ ಇದೆ... "ನವ್ಯ"ವಾಗಿಯೂ ಇದೆ.... ವಿಭಿನ್ನವಾಗಿದೆ :)

    ಪ್ರತ್ಯುತ್ತರಅಳಿಸಿ
  2. ಕತೆಯ ನಡುವೆ ಒಂದು ಸೊಗಸಾದ ಕವನ...ಆಗಾಗ ಇಂಥವು ಬರುತ್ತಿರಬೇಕು.ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  3. ಗುರುಮೂರ್ತಿಯವರೆ,
    ನನ್ನ ಪದ್ಯ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ.

    ಸುಧೇಶ್‌ ಅವರೇ,
    ಚೆಂದವಾಗಿ ಇದೆ ಎಂದರೆ ನೀವು ಯಾವಾಗಲೂ ಬರೆಯುವ ಹಾಗೆ ಇಲ್ಲ ಎಂತಲೂ, ನವ್ಯವಾಗಿದೆ ಎಂದರೆ ಏನೂ ಅರ್ಥವಾಗಲಿಲ್ಲ ಎಂತಲೂ, ವಿಭಿನ್ನವಾಗಿದೆ ಎಂದರೆ ... ಅಲ್ಲವೇ? ಈ ಸಾರಿ ನೀವು ರೊಚ್ಚಿಗೆದ್ದು ಬಾರಿಸುತ್ತೀರೆಂದು ಎಣಿಸಿದ್ದೆ, ಹೋಗಲಿ ಪಾಪ ಅಂತ ಸ್ಮೈಲಿ ಹಾಕಿಬಿಟ್ಟಿದ್ದೀರಿ :) (ಸುಮ್ಮನೆ ತಮಾಷೆ ಮಾಡಿದೆ ಕಣ್ರೀ, ತಮಾಷೆ ಮಾಡುವ ಸಾಹಸಕ್ಕೆ ಕೈ ಹಾಕಿದ್ದಕ್ಕೆ ಕ್ಷಮೆಯಿರಲಿ! ಆದ್ರೂ, ನೀವು ಯಾವಾಗಲೂ ವಸ್ತುವನ್ನು ವಿಶ್ಲೇಷಿಸಿ ಬರೆಯುವವರು ಈ ಸಾರಿ ಏಕೆ ಹಾಗೆ ಮಾಡಲಿಲ್ಲ ಎಂದು ಅನುಮಾನ?)

    ಶಿವು ಅವರೆ,

    ತುಂಬಾ ಥ್ಯಾಂಕ್ಸ್. ನಿಮ್ಮ ಬ್ಲಾಗಿಗೆ ಬಂದು ಬಹಳ ದಿನವಾಯ್ತು. ಹೊಸದೇನಾದರೂ ಬಂದಿದೆಯೇ? ನನಗೆ ಅಪ್‌ಡೇಟ್‌ ಬರದೆ ತುಂಬಾ ದಿನವಾಯ್ತು.

    ಪ್ರತ್ಯುತ್ತರಅಳಿಸಿ
  4. hello muthu....
    ಪದ್ಯ ಚೆನ್ನಾಗಿದೆ ಕಣೆ :)
    ಆದ್ರೆ ಯಾವ್ದದು ಗೋಡೆ ನೀನು ಬೀಳಿಸ್ತಿರೋದು?ಅದೂ ಮೂರು ಮಕ್ಕಳ ಜೊತೆ????!!!!

    ಪ್ರತ್ಯುತ್ತರಅಳಿಸಿ
  5. nimma comment ge uththara bareyalu aagale illa...

    thamashe yenu illa :) kavana nijavaagiyu ishta aayithu :) thumba vishleshane maadoke hogalilla... yaavaagalu yaake nimma thale thinnuvudu antha :):)

    ಪ್ರತ್ಯುತ್ತರಅಳಿಸಿ