ಶುಕ್ರವಾರ, ಸೆಪ್ಟೆಂಬರ್ 12, 2008

ಶಿಶು ಪ್ರಾಸ ಇರಬಹುದು.......

ಲಾಭ - ನಷ್ಟ, ಕಾಸ್ಟ್ ಪ್ರೈಸ್ - ಸೆಲ್ಲಿಂಗ್ ಪ್ರೈಸ್ ಬಗ್ಗೆ ನಾಲ್ಕನೆ ಕ್ಲಾಸಿನ ಮಕ್ಕಳಿಗೆ ಆಟಗಳ ಸಿಡಿಗಳನ್ನು ಮಾಡುವ ಪ್ರಾಜೆಕ್ಟನ್ನು ಕೈಗೆತ್ತಿಕೊಂಡಿದ್ದಾರೆ, ನಮ್ಮ ಕಂಪನಿಯವರು. ಸರಿ, ನನಗೆ ಸಿಡಿ ಟೈಟಲ್ ಸಾಂಗ್ ಬರೆಯುವ ಕೆಲಸ - ಇಂಗ್ಲೀಷಿನಲ್ಲಿ. ಆದರೆ, ಆಗಿದ್ದೇನೂಂದ್ರೆ...


ಮೀಟೂನು ಕಿಟ್ಟುನೂ ಮಾಡ್ಬೇಕಂತೆ ಬಿಸಿನೆಸ್
ಯಾರಿಗೊತ್ತು? ಯಾರ್ಹೇಳ್ಕೊಡ್ತೀರ್? ಆಗ್ಲೆಬಾರ್ದು ಲಾಸಸ್

ಕಿಟ್ಟುಗಂತು ಅದೇ ಯೋಚ್ನೆ, ಎಷ್ಟೊಂದ್ ಜಾಸ್ತಿ ಕಾಸ್ಟು
ಸೆಲ್ಲಿಂಗ್ ಪ್ರೈಸ್ ಜಾಸ್ತಿ ಆಗ್ಲೇಬೇಕು ಹೇಗಾದ್ರೂ ಅಟ್ ಲಾಸ್ಟು

ಸೆಲ್ಲಿಂಗ್ಗಿಂತ ಕಾಸ್ಟ್ ಪ್ರೈಸೇ ಜಾಸ್ತಿ ಏನಾರ್ ಆದ್ರೆ
ಕಿಟ್ಟೂಗ್ ಚಿಂತೆ ಲಾಸಾಗಿ ಬಿಸಿನೆಸ್ ಬಿದ್ಗಿದ್ ಹೋದ್ರೆ

ಪರ್ಸೆಂಟ್ ಕಂಡು ಹಿಡಿಯೋದ್ರಲ್ಲಿ ಮೀಟು ಬಲು ಬಲು ಜಾಣ
ಅಷ್ಟಕಿಷ್ಟು, ಇಷ್ಟಕಷ್ಟು, ಹಂಗಾರ್ ನೂರಕೆಷ್ಟು? ಅನ್ನೋದೆ ಅದರ ಪ್ರಾಣ

ಅಂಗಡಿ ಕಟ್ಟಿ, ಸಾಮಾನ್ ತಂದು, ಕಿಟ್ಟು - ಮೀಟು ಜೋಡಿ
ಬಿಸಿನೆಸ್ ಮಾಡಿ, ಪ್ರಾಫಿಟ್ ಅಂತು ಬಂತೇ ಬಂತು ನೋಡಿ

20 ಕಾಮೆಂಟ್‌ಗಳು:

  1. nimma holike nodi nanage jnanapita prashati banda haage annistide!

    aadare, company kelida haage englishinalli innu bareyalu aagilla :(

    ಪ್ರತ್ಯುತ್ತರಅಳಿಸಿ
  2. ಹೇಮ, ಅಂತೂ ಕನ್ನಡ ಅಕ್ಷರಗಳು ಸಿದ್ಧವಾದುವು. ನಿನ್ನ ಬ್ಲಾಗ್ ನ " ಬರೆಯೋ ಆಸೆ " ಎಂಬಲ್ಲಿ ಸುಂದರವಾದ ಚಿತ್ರ ಹಾಗೂ ಕನ್ನಡ ಬರವಣಿಗೆಯನ್ನು ಹೇಗೆ ಮೂಡಿಸಿದೆ.

    ಪ್ರತ್ಯುತ್ತರಅಳಿಸಿ
  3. ಅದನ್ನು ಮಾಡುವುದು ತುಂಬಾ ಸುಲಭ. ನೀವು ಲಾಗಿನ್ ಆದ ಮೇಲೆ ಕಸ್ಟಮೈಜ್ ಗೆ ಹೋಗಿ, ಅಲ್ಲಿಂದ ಲೇಔಟ್ - ಪೇಜ್ ಎಲಿಮೆಂಟ್ಸ್ ಗೆ ಹೋಗಿ.

    ನಿಮ್ಮ ಬ್ಲಾಗಿನ ಅಸ್ಥಿಪಂಜರ ಕಾಣುತ್ತದೆ! ಅಲ್ಲಿ ಹೆಡರ್ ಸೆಲೆಕ್ಟ್ ಮಾಡಿ. ಅದು, ಚಿತ್ರವನ್ನೂ, ಪಠ್ಯವನ್ನೂ ಸೇರಿಸಲು ಕೇಳುತ್ತದೆ. ಚಿತ್ರವನ್ನು ನೀವು ನಿಮ್ಮ ಕಂಪ್ಯೂಟರ್ ಅಥವಾ ಇಂಟರ್ ನೆಟ್ ನಿಂದ ಆಯ್ಕೆ ಮಾಡಿ ಹಾಕಿಕೊಳ್ಳಬಹುದು.

    ಪ್ರತ್ಯುತ್ತರಅಳಿಸಿ
  4. ಈಗ ತಾನೆ ನಿನ್ನ ಕಮೆಂಟ್ ನೋಡಿದೆ.Thank you. ಅದನ್ನು ಮಾಡಲು ಪ್ರಯತ್ನಿಸುವೆ.

    ಪ್ರತ್ಯುತ್ತರಅಳಿಸಿ
  5. ಹೆಡ್ಡರ್ ಬಳಿ instead ಟಿಕ್ ಮಾಡಬೇಕಿತ್ತು ಅನಿಸುತ್ತೆ. ಇನ್ನೊಮ್ಮೆ ಹಾಗೆ ಮಾಡುವೆ. ಆದರೆ ಟೆಕ್ಸ್ಟ್ ಬರೆಯುವ ಬಗೆ ಗೊತ್ತಾಗಲಿಲ್ಲ.

    ಪ್ರತ್ಯುತ್ತರಅಳಿಸಿ
  6. ಹೆಡ್ಡರ್ ಮೇಲೆ ಮಾಡಿದರೆ ಅದು ಎಲ್ಲೋ ಬಂದಿದೆ !

    ನಿನ್ನ ಹೊಸ ಪೋಸ್ಟ್ ಗೆ ಕಾಯುತ್ತಿದ್ದೇನೆ.

    ಪ್ರತ್ಯುತ್ತರಅಳಿಸಿ
  7. nimage elli tondareyaaguttide endu nanage gottayitu.
    photo mattu aksharagaleradannu hondisuvudu swalpa kashta. photovannu higgisuvudo - kuggisuvudo maadi nodabahudu.

    alliye iruva optionagalannu swalpa kedaki nodi, yaavudaadaru ondu namage honduva haage siguttade.

    ಪ್ರತ್ಯುತ್ತರಅಳಿಸಿ
  8. Hema avare,

    Prayathna chennaagide.
    Adare idannu naalkane tharagathiya makkalige odalu kottare avarige thumba kashta aagabahudeno. ekendare padyadalli oththaksharagaliruva padagaLu thumba ive.
    engishnalli barediruva padyavannu blogigaagi kannadakke anuvaadisiddare paravaagilla. Kannada medium makkaligoo ee padyavannu koduvudiddare, swalpa yochisi.
    padya ishta aayithu:)

    ಪ್ರತ್ಯುತ್ತರಅಳಿಸಿ
  9. ಮೇಲಿನ ಕಮೆಂಟ್ ಗೆ ನನ್ನದೊಂದು ಉತ್ತರ.
    ಈ ಪದ್ಯವನ್ನು ಬಹುಶಃ ಬಾಯಲ್ಲಿ ಹಾಡಿಕೊಂಡು ಆಟ ಆಡಿಸಲು ಬರೆದಿರೋದು ಅಂದುಕೊಳ್ತೇನೆ.ಇಲ್ಲಿಯ ಪದಗಳಲ್ಲಿ ಒತ್ತಕ್ಷರಗಳೇ ಹೆಚ್ಚಿವೆ ಅನಿಸಿದರೂ ಅದು ಆಡು ಮಾತಿನಲ್ಲಿದೆ ಅಷ್ಟೆ. ಕ್ಲಿಷ್ಟ ಪದಗಳಿಲ್ಲ.ಅಷ್ಟಕ್ಕೂ ಹೆಚ್ಚಿನ ಒತ್ತಕ್ಷರಗಳು ಇಂಗ್ಲೀಷ್ ಪದಗಳು.

    ( ಪರಿಮಳ ಲಗ್ನಪತ್ರಿಕೆ ಕೊಟ್ಟು ಹೋದಳು. ನಮ್ಮ ಮನೆಯ ಬಳಿಯೇ ಮದುವೆ. ನಿನ್ನನ್ನೂ ಮೀಟ್ ಮಾಡ್ತೇನೆ ಅಂದಳು )

    ಪ್ರತ್ಯುತ್ತರಅಳಿಸಿ
  10. ಹೇ, ನೀವಿಬ್ಬರೂ ಹೇಳೋದು ಸರಿಯೇ...
    ಅಲ್ಲಿ ಇರೋದು ಸ್ವಾರಸ್ಯ.. ನಾನು ಮೂಲತಃ ಇಂಗ್ಲೀಷಿನಲ್ಲಿ ಬರೆಯುವವಳಲ್ಲ... ಇಂಗ್ಲೀಷಿನಲ್ಲಿ ಬರೆಯುವ ಪ್ರಯತ್ನ ಮಾಡುತ್ತಿದ್ದಾಗ, ಈ ಕನ್ನಡ ಪದ್ಯ ತಾನೇ ತಾನಾಗಿ ಹರಿಯಿತು.
    ಇದು ಅನುವಾದವೂ ಅಲ್ಲ. ಸದ್ಯಕ್ಕೆ ಇದನ್ನು ಪ್ರಾಜೆಕ್ಟಿಗೆ ಉಪಯೋಗಿಸುವ ಯೋಚ್ನೆಯೂ ಇಲ್ಲ.

    ನಿಮ್ಮಿಬ್ಬರ ಮುಂದಿನ ಪೋಸ್ಟಿಗಾಗಿ ಕಾಯುತ್ತಿದ್ದೇನೆ. :)

    ಪ್ರತ್ಯುತ್ತರಅಳಿಸಿ
  11. ನಿನ್ನ ವಿವರಣೆ ಸರಿ ಇದೆ.
    ಇಂಗ್ಲೀಷ್ ಪದ್ಯ ಹೊಳೆದ ಮೇಲೆ ನಮಗೂ ಓದಲು ಸಿಕ್ಕರೆ ಚೆನ್ನ

    ಪ್ರತ್ಯುತ್ತರಅಳಿಸಿ
  12. ಸರಿ.... ನನ್ನ ಸ೦ಶಯಕ್ಕೆ ಉತ್ತರ ದೊರೆಯಿತು. ನಿಮಗೆ ಇ೦ಗ್ಲೀಷ್ ಪದ್ಯ ಹೊಳೆದಾಗ ನಮಗೂ ತಿಳಿಸುವುದನ್ನು ಮರೆಯಬೇಡಿ.
    ನನ್ನ ಹೊಸ ಪೋಸ್ಟ್ ಆಗ್ಲೇ ಬ೦ದ್ಬಿಟ್ಟಿದೆ:)

    ಪ್ರತ್ಯುತ್ತರಅಳಿಸಿ
  13. ಶಿಶು ಪ್ರಾಸ ಚೆನ್ನಾಗಿದೆಯಲ್ಲ! ಬರೆಯುತ್ತಿರಿ.
    ಶಿವು.ಕೆ

    ಪ್ರತ್ಯುತ್ತರಅಳಿಸಿ