ಕಾಲೇಜಿಗೆ ಹೋಗುತ್ತಿದ್ದಾಗ ಬರೆದಿದ್ದು. ಹೀಗೆ, ಕಸ ತೆಗೆಯುವಾಗ ಕೈಗೆ ಸಿಕ್ಕಿ ನಗು ಬರಿಸಿಬಿಟ್ಟಿತು. ನೀವೂ ಓದಿ ನೋಡಿ.
ರಜಿನಿ,
ನಿನ್ನ ಒಡಲಲ್ಲಿ,
ಮೇಲೊಂದು ಚುಕ್ಕಿ,
ಕೆಳಗೊಂದು ಚುಕ್ಕಿ,
ಮೇಲೆ ಮತ್ತೊಂದು,
ಕೆಳಗೆ ಅದಕೊಂದು,
ವಿಶ್ವಾಮಿತ್ರಾ ಹುಟ್ಟಿಸಿದನೇನು ಅಣಕ?
ಊಹೂಂ, ಇದು ಸ್ವಯಂಕೃತಾಪರಾಧ!
ಇಲ್ಲಿ ಒಬ್ಬೊಬ್ಬನೂ ತ್ರಿಶಂಕು,
ಏಕೆ ನಾನು?
ಎಲ್ಲಿಗೆ ನಾನು?
ಏನು ನಾನು?
ಆಮೇಲೇನು?
ಯಾರಿಗೂ ಗೊತ್ತಿಲ್ಲ
ಬೇಕೆ? ಅದೂ ಇಲ್ಲ
ತಿಳಕೊಳ್ಳಲು ಸಮಯವಿಲ್ಲ!
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
6 ತಿಂಗಳುಗಳ ಹಿಂದೆ
ಕವನ ಓದಿದೆ.
ಪ್ರತ್ಯುತ್ತರಅಳಿಸಿಸಧ್ಯಕ್ಕೆ ಏನೂ ಅರ್ಥವಾಗದ ತ್ರಿಶಂಕು ಸ್ಥಿತಿ ನನ್ನದು. ನಿಧಾನವಾಗಿ ಓದಿ ಅರ್ಥವಾದ ಮೇಲೆ ಮತ್ತೊಂದು ಕಮೆಂಟ್ ಬರೆಯುವೆ.
eke gondala?
ಪ್ರತ್ಯುತ್ತರಅಳಿಸಿನಿನ್ನ ಕವನದ ಮೇಲಿನ ಚುಕ್ಕಿ ಅರ್ಥವಾಯಿತು. ಕೆಳಗಿನದು ( ಭೂಲೋಕದ್ದು) ಅರ್ಥವಾಗಲಿಲ್ಲ.
ಪ್ರತ್ಯುತ್ತರಅಳಿಸಿವಿಶ್ವಾಮಿತ್ರ, ತ್ರಿಶಂಕು-ಇವರ ಪ್ರಸ್ತಾಪ ಸ್ಪಷ್ಟವಾಗಲಿಲ್ಲ.
ಕವನ ಓದಿದಾಗ ಮೇಲಿನದು ಸ್ವಲ್ಪ ಅರ್ಥವಾಯಿತು. ಕೆಳಗಿನದು ಸ್ವಲ್ಪ ಬಿಡಿಸಿ ಹೇಳಿದರೆ ಗೊತ್ತಾಗುತ್ತದೆ.
ಪ್ರತ್ಯುತ್ತರಅಳಿಸಿನ೦ಗೂ ಅರ್ಥ ಆಗಲಿಲ್ಲ... ಸ್ವಲ್ಪ ಬಿಡಿಸಿ ಹೇಳ್ರಿ... ಯಾರಿಗೂ ಅರ್ಥ ಆಗಬಾರದೆ೦ದೇ ಈ ಕವನ ಬರೆದ್ರಾ? ಸ್ವಲ್ಪ ಡಿ ಕೋಡ್ ಮಾಡಿಬಿಡಿ.
ಪ್ರತ್ಯುತ್ತರಅಳಿಸಿನಿನ್ನ ಕವನಕ್ಕೆ ಕಮೆಂಟ್ ಬರೆದ ಮೇಲೆ ಅರ್ಥವಾಯಿತು.
ಪ್ರತ್ಯುತ್ತರಅಳಿಸಿಕತ್ತಲ ಒಡಲಲ್ಲಿ ನಡೆವವ್ಯಾಪಾರವನ್ನೂ ಈ ಪ್ರಪಂಚದ ಹುಸಿತನವನ್ನು ತೋರಿಕೆಯ ಆಡಂಬರವನ್ನೂ, ಬೇರುಗಳಿಲ್ಲದ ಬದುಕನ್ನು ಮಾರ್ಮಿಕವಾಗಿ ಚಿತ್ರಿಸಿರುವೆ.
ವಿಶ್ವಾಮಿತ್ರ ತ್ರಿಶಂಕುವಿಗೆ ಸ್ವರ್ಗ ಸೃಷ್ಟಿಸಿದ.ಈ ಭೂಮಿಯ ಮೇಲಿರುವವರೆಲ್ಲಾ ತ್ರಿಶಂಕುಗಳೆ. ಆದರೆ ಇಲ್ಲಿ ವಿಶ್ವಾಮಿತ್ರನ ಕೈವಾಡವಿಲ್ಲ.
@ ಚಂದ್ರಕಾಂತ,
ಪ್ರತ್ಯುತ್ತರಅಳಿಸಿಕಾಮೆಂಟುಗಳು ಹರಿದಿರುವ ರೀತಿ ನನಗೆ ಒಂದು ಬಗೆಯ ಖುಷಿ ಕೊಡುತ್ತಿದೆ. ;)
ಆಕ್ಚುವಲಿ ಒಂದು ದಿನ ಟ್ರಾಫಿಕ್ ಜಾಮಿನಲ್ಲಿ ಸಿಕ್ಕಿಕೊಂಡು, ಕಣ್ಣಿಗೆ ರಾಚುತ್ತಿದ್ದ ಗಾಡಿಯ ಲೈಟುಗಳನ್ನು ನೋಡಿ ಬರೆದದ್ದು ಈ ಕವನ.
ನೀವು ಗುರುತಿಸಿರುವ ’ಪಾಯಿಂಟೇ’ನನ್ನ ಮನಸ್ಸಲ್ಲೂ ಇದ್ದದ್ದು.
@ ಶಿವು ಮತ್ತು ಸುಧೇಶ್,
ಇನ್ನೂ ವಿವರಣೆ ಬೇಕೆ? ಕೊಡಬೇಕಂದ್ರೆ ನನಗೆ ಗೊತ್ತಿಲ್ಲ :)
kavana chennagide......
ಪ್ರತ್ಯುತ್ತರಅಳಿಸಿneenu gaadiya lightu nodi baredadda?..naanu oduvaga network towergala mele minuguva lightu kalpisikonde :)
ಕೊನೆಗೂ ಅರ್ಥವಾಯಿತು ಕವನ:)
ಪ್ರತ್ಯುತ್ತರಅಳಿಸಿಅ೦ದ ಹಾಗೆ ಕನ್ನಡ ಫಾ೦ಟ್ ಕುರಿತು ನಿಮಗಿದ್ದ ಸಮಸ್ಯೆಗೆ ಪರಿಹಾರ ದೊರೆಯಿತೆ?
ಅಷ್ಟು ಕಷ್ಟವಾಯಿತೆ ಪದ್ಯ ಅರ್ಥವಾಗುವುದು? ನಾನು ಪದ್ಯ ಬರೆಯಬೇಕೋ, ಬೇಡವೋ ಎಂದು ಅನುಮಾನ ಬರ್ತಿದೆ ನಂಗೆ? :)
ಪ್ರತ್ಯುತ್ತರಅಳಿಸಿಇನ್ನು ಫಾಂಟ್ ಬಗ್ಗೆ, ಒಂದು ಸಿಸ್ಟಮ್ನಲ್ಲಿ ಇದ್ದು ಇನ್ನೊಂದರಲ್ಲಿ ಇಲ್ಲದಿರುವುದು ಒಂದು ರೀತಿಯಾದರೆ, ನನ್ನದೇ ಬೇರೆ ಥರ ಸಮಸ್ಯೆ! ನನ್ನದೇ ಕಂಪ್ಯೂಟರಿನಲ್ಲಿ, ವರ್ಡಿನ ಬರಹ ಅಥವಾ ನುಡಿಯಲ್ಲಿ ಬರೆದು ಬ್ಲಾಗಿಗೆ ಕಾಪಿ ಮಾಡಿದರೆ, ಬರಹ ಐ ಎಮ್ ಇ ಅದನ್ನು ಓದುತ್ತಿಲ್ಲ! ಇದಕ್ಕೆ ನನಗೆ ಪರಿಹಾರವೇ ಸಿಗುತ್ತಿಲ್ಲ.
ನಿನಗೆ ಪದ್ಯ ಬರೆಯಬೇಕೋ ಬೇಡವೋ ? ಎಂಬ ಅನುಮಾನ ಎಂದಿರುವೆ. ನಿಜವಾದ ಕವನವೆಂದರೆ ಗದ್ಯದ ಹಾಗೆ ಎಲ್ಲ ನೇರ ಸರಳ ಇರುವುದಿಲ್ಲ. ಓದುಗರ ಕಲ್ಪನೆಗೆ ತಕ್ಕಂತೆ ಅರ್ಥ ವಿಸ್ತಾರವಾಗುತ್ತಾ ಹೋಗುತ್ತದೆ. ಆದ್ದರಿಂದ ನೀನು ಕವನ ಬರೆಯುವುದನ್ನು ಧಾರಾಳವಾಗಿ ಮುಂದುವರೆಸಬಹುದು.:)
ಪ್ರತ್ಯುತ್ತರಅಳಿಸಿಕವನ ತುಂಬಾ ಚೆನ್ನಾಗಿದೆ. ನಿಮಗಿಂತ ಮೊದಲು ಟ್ರಾಫಿಕ್ ಜಾಮ್ಗೆ ಧನ್ಯವಾದಗಳು:-).ನಿಮಗೂ ಕೂಡ .ಕವನ ಚೆನ್ನಾಗಿ ಬಂದಿದೆ. ನಿಮ್ಮ ಆಸೆ ಇಷ್ಟ ಆಯ್ತು.(ಬರೆಯೋ ಆಸೆ)ಆಸೆ ಹೀಗೇ ಇರಲಿ. ಬರೆಯುತ್ತಿರಿ .ಬರುತ್ತಿರುತ್ತೇನೆ.
ಪ್ರತ್ಯುತ್ತರಅಳಿಸಿನನಗೆ ಅನುಮಾನ ಬಂದಾಗಲೆಲ್ಲಾ, ನೀವು ಧೈರ್ಯ ಹೇಳುತ್ತೀರಿ. ತುಂಬಾ ಧನ್ಯವಾದಗಳು. :)
ಪ್ರತ್ಯುತ್ತರಅಳಿಸಿನಿಮ್ಮ ಧನ್ಯವಾದಕ್ಕೆ ನನ್ನ ಧನ್ಯವಾದಗಳು!
ಪ್ರತ್ಯುತ್ತರಅಳಿಸಿನನ್ನ ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ಹೀಗೆ ಬರುತ್ತಿರಿ. :)
ಹೌದು... ನನಗೆ ನಿಜವಾಗಿಯೂ ಕವನ ಮೊದಲು ಅರ್ಥವಾಗಲೇ ಇಲ್ಲ. ಟ್ರಾಫಿಕ್ ಲೈಟುಗಳ ಬಗ್ಗೆ ಬರೆದಿದ್ದು ಎ೦ದು ಗೊತ್ತಾದ ಮೇಲೆಯೇ ಕವನದ ಒಳಾರ್ಥ ಗೊತ್ತಾಗಿದ್ದು. ನಿಮ್ಮ ಪದ್ಯ ಬರೆಯಬೇಕೋ ಬೇಡವೋ ಎ೦ಬ ಸಮಸ್ಯೆಗಿ೦ತ ನನಗೆ ಕವನಗಳು ಅರ್ಥವಾಗುವುದಿಲ್ಲವೇನೋ ಎ೦ಬ ಅನುಮಾನ ಮೂಡುತ್ತಿದೆ:)
ಪ್ರತ್ಯುತ್ತರಅಳಿಸಿಫಾ೦ಟ್ ಸಮಸ್ಯೆಯ ಬಗ್ಗೆ ಏನು ಮಾಡಬೇಕೆ೦ದು ತಿಳಿಯುತ್ತಿಲ್ಲ. ಸಮಸ್ಯೆ ಸರಿಯಾಗಿ ಅರ್ಥವಾಗುತ್ತಿಲ್ಲ:)
ಸಧ್ಯದಲ್ಲೇ ನನ್ನ ಹೊಸ ಪೋಸ್ಟ್ ಬರುತ್ತದೆ. ಅನಿರೀಕ್ಷಿತವಾಗಿ ವಿದೇಶ ಪ್ರಯಾಣದ ಯೋಗ ಬ೦ತು. ಆದ್ದರಿ೦ದ ಏನೂ ಬರೆಯಲಾಗಲಿಲ್ಲ. ಮನಸ್ಸಿನಲ್ಲಿ ಕೆಲವು ವಿಷಯಗಳು ಕುಣಿಯುತ್ತಿದೆ. ಆದಷ್ಟು ಬೇಗ ಅಕ್ಷರ ರೂಪಕ್ಕಿಳಿಸುತ್ತೇನೆ. Thanks for asking:)
oh! all the best.
ಪ್ರತ್ಯುತ್ತರಅಳಿಸಿA videshada baggenu bariri. :)
font bagge tale kedisikollodanne bittubittiddini naanu. nodona bidi inyavaagadru.