ಸ್ನೇಹಿತರೇ,
ಈ ಬಾರಿ ನಾನು ಬರೆಯುತ್ತಿರುವುದು ಕ್ರಿಯೇಟಿವ್ ಲೇಖನವಾಗಲೀ ಪದ್ಯವಾಗಲೀ ಅಲ್ಲ, ಬದಲಿಗೆ ಇದೊಂದು ವಿನಂತಿ ಪತ್ರ. ಜಾಹೀರಾತು ಪತ್ರವೆನ್ನಲೂ ಅಡ್ಡಿಯಿಲ್ಲ.
ಸುಮಾರು ಎರಡು ವರ್ಷಗಳ ಹಿಂದೆ ನಾನು ಒಂದು ಕನ್ಸಲ್ಟೆನ್ಸಿ ಮಾಡಬೇಕೆಂದು ನಿರ್ಧರಿಸಿ, ಆ ನಿಟ್ಟಿನಲ್ಲಿ ಕೆಲಸ ಮಾಡಲು ಶುರು ಮಾಡಿದ್ದೆ. ಈಗ ಅದರ ಬಗ್ಗೆ ಧೈರ್ಯವಾಗಿ ಎಲ್ಲರ ಮುಂದೆ ಮಾತನಾಡುವಂತಹ ಸಮಯ ಬಂದಿದೆ. ನನ್ನ ಪುಟ್ಟ ಕನ್ಸಲ್ಟೆನ್ಸಿಯ ಹೆಸರು 'ಶ್ರೀ ಶಾರದಾ ಸೊಲ್ಯೂಷನ್ಸ್'.
ನನ್ನ ಈ ಕನ್ಸಲ್ಟೆನ್ಸಿಯಲ್ಲಿ ಭಾಷಾಂತರ, ಲಿಪ್ಯಂತರ, ಡಿಟಿಪಿ, ಪ್ರತಿಲೇಖನ (Transcription), ಸಂಪಾದನೆ, ಕರಡು ತಿದ್ದುವುದು ಈ ಮುಂತಾದ ಭಾಷಾ ಸೇವೆಗಳೆಲ್ಲವನ್ನು ಒದಗಿಸುತ್ತೇವೆ. ಸದ್ಯ, ನಾವು ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಈ ಮೂರು ಭಾಷೆಗಳಲ್ಲಿ ಸೇವೆಗಳನ್ನು ಕೊಡಬಲ್ಲೆವು.
ನಿಮಗೇ ಈ ಸೇವೆ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಬಹುದು. ನಿಮ್ಮ ಸ್ನೇಹಿತರಿಗೆ ಇಂತಹ ಸೇವೆಗಳು ಬೇಕಾದಲ್ಲಿ ದಯವಿಟ್ಟು ಅವರಿಗೆ ನಮ್ಮ ಪರಿಚಯ ಮಾಡಿಕೊಡಿ.
ಈ ಈಮೇಲ್ ವಿಳಾಸಕ್ಕೆ ನಿಮ್ಮ ಅಗತ್ಯಗಳ ಬಗ್ಗೆ ತಿಳಿಸಿ ಬರೆದರೆ, 24 ಗಂಟೆಗಳೊಳಗಾಗಿಯೇ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ - hemak291@gmail.com
ಧನ್ಯವಾದಗಳು,
ನಿಮ್ಮಲ್ಲೇ ಒಬ್ಬಳಾದ
ಹೇಮಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ