ನನ್ನ ಅಕ್ಕ ಇಂಗ್ಲೀಷಿನಲ್ಲಿ ಬರೆದ ಪದ್ಯವನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಅವಳದ್ದೇ ಆರ್ಡರ್, ಅವಳೇ ಎಡಿಟರ್, ಡೈರೆಕ್ಟರ್ :).....
ಅವಳ ಮನದ ಬಾಗಿಲು ಹಾಕಿತ್ತು
ಬಹುದಿನಗಳಿಂದ
ಭದ್ರಪಡಿಸಿದ್ದಳು ಬಾಗಿಲನ್ನು
ಬಹುದೊಡ್ಡ ಬೀಗ ಹಾಕಿ
ಒಳಗಡೆ ಇಣುಕಲು ,
ಯಾರಿಗೂ ಸಾಧ್ಯವಾಗಿಲ್ಲ....
ಅದರಾಚೆಗೆ ಏನಿತ್ತು?
ಕತ್ತಲೆಯ ಮಡಿಲಲ್ಲಿ....
ಕಾಣದ ಕಡಲಾಳದಲ್ಲಿ...
ಮನದ ಸಾಮ್ರಾಜ್ಯದಲ್ಲಿ....
ತೋರದ ಜಗತ್ತಿನಲ್ಲಿ....
ಬೀಗದ ಕೈ ಕಳೆದು ಹೋಗಿತ್ತು
ಒಂಟಿತನದ ತಳವಿರದ ಬಾವಿಯಲ್ಲಿ
ಬೆಳ್ಳಿ ಮೀನುಗಳು ಹರಿದಾಡುತ್ತಿದ್ದವು
ಅವಳ ಮನದ ಪುಟಗಳಲ್ಲಿ...
ಯೋಚನೆಯ ಜೇಡವೊಂದು...
ಬಲೆಗಳನು ಹೆಣೆದುಬಿಟ್ಟಿತ್ತು ಅವಳ ಎದೆಯ ನಾಕು ಕೋಣೆಯಲ್ಲಿ
ಧೂಳು ಹಿಡಿದಿತ್ತು...ಪದರ...ಪದರವಾಗಿ
ಮೃದು,ಮಧುರವಾದದ್ದೇನೂ ಒಳಗೆ ಬರಲಾಗದಂತೆ
...ಬೆಚ್ಚಗಿನ ಸೂರ್ಯಕಿರಣಗಳು
...ಮುತ್ತಿನ ಮಣಿಗಳ ಮಂಜು
...ತಂಪಿನ ತಂಗಾಳಿ
ಯಾವುದಕ್ಕೂ ಅಲ್ಲಿ ಪ್ರವೇಶವಿಲ್ಲ...
ಗೆಳೆಯರು ಬಂದರು...
ಬೀಗ ತೆಗೆದು ನೋಡಲು,ಮನಸು ಹಗುರ ಮಾಡಲು...
ಏನೂ ಸುಖವಿಲ್ಲ...
ಅಸೂಯೆ ಹುಟ್ಟಿ, ಅವಳ ದಾರಿ ತಪ್ಪಿಸಲು ಬಂದರು ಕೆಲವರು
ಬಂದ ದಾರಿಗೆ ಸುಂಕವಿಲ್ಲ...
ಆ ದಿನ , ಆಷಾಡದ ಶುಕ್ರವಾರ
ಮುಳುಗಿದ್ದಳು ಅವಳು ಕಚೇರಿಯ ಕಡತ-ಡ್ರಾಯಿಂಗುಗಳಲ್ಲಿ,
ಗಾಳಿಗೂ ತನ್ನ ಅದೃಷ್ಟದ ಪರೀಕ್ಷೆ ಮಾಡಬೇಕೆನಿಸಿರಬೇಕು
………………ನವಿರಾಗಿ ಅವಳ ತಲೆಯ ಮೇಲೆ ಹಾಯ್ತು
ತನ್ನ ತಲೆಗೆ ಸಿಕ್ಕ ಹೇರುಪಿನ್ನನ್ನು, ಮತ್ತೂ ಬಿಗಿಯಾಗಿಸಿದಳು
ಗಾಳಿಗೆ ಅಲ್ಲೇನೂ ಕೆಲಸವಿರಲಿಲ್ಲ...
ಅವನು ಅವಳನ್ನೇ ನೋಡುತ್ತಿದ್ದ……
………ಎದುರಿನ ಕಿಟಕಿಗೆ ಒರಗಿ.
ಅವನು ಏನು ಹೇಳಬಹುದು? ಇವಳೇ ಊಹಿಸಿದಳು...
“ಆ ಬಿಗಿಯನ್ನು ತೆಗೆದುಬಿಡು...ಸುಂದರವಾಗಿ ಕಾಣುತ್ತೀಯೆ”
* * *
ಇದೇ ಮಾತು ಕೇಳಿ ಕೇಳಿ ಅವಳಿಗೂ ಬೇಸರವಾಗಿತ್ತು
ನೂರು ಸಲ, ಸಾವಿರ ಸಲ ಈ ಹಿಂದೆಯೂ ಕೇಳಿ ಆಗಿತ್ತು
ನೂರು ಜನ, ಸಾವಿರ ಜನ ಅದನ್ನೇ ಹೇಳಿದ್ದರು
ಇವಳು ಕುಂಟೇಬಿಲ್ಲೆಯಾಡುತ್ತಾ ಮನೆಯಿಂದ ಮನೆಗೆ ಎಗರುವಾಗ
…ಪಕ್ಕದಲ್ಲೇ ಗೋಲಿ ಆಡುತ್ತಿದ್ದ ಹುಡುಗರು
ಇವಳು ಮುಂದಿನ ಬೆಂಚಿನಲ್ಲಿ ಕೂತು ನೋಟ್ಸಿನೊಂದಿಗೆ ಒದ್ದಾಡುವಾಗ
…ಹಿಂದುಗಡೆ ಬೆಂಚಿನಲ್ಲಿ ಕೂತ ಹುಡುಗರು
ಇವಳು ಕೆಮಿಸ್ಟ್ರಿ ಲ್ಯಾಬಿನಲ್ಲಿ ಸಲ್ಯೂಷನ್ ತಯಾರಿಸುವಾಗ
…ಆಚೆಕಡೆಯ ಸಾಲಿನಲ್ಲಿ ನಿಂತ ಹುಡುಗರು
* * *
ಅವಳು ಫೈಲಿನೊಳಗೆ ಇನ್ನೂ ಮುಳುಗಲು ಪ್ರಯತ್ನಿಸಿದಳು
ಅವಳಿಗೂ ಗೊತ್ತು ಅದೇ ದಾರಿ ಎಂದು...
ಆದರೆ, ಅವನು ಅದನ್ನು ಹೇಳಲೇ ಇಲ್ಲ.....
"ಗಂಟು ತೆಗಿ ಒದ್ದೆ ಕೂದಲು , ತಲೆನೋವು ಬಂದೀತು...
ನನ್ನ ತಾಯಿ ಹೇಳುತ್ತಿದ್ದರು... ತಂಗಿಗೆ!
ಮುದ್ದು ತಂಗಿ ನನ್ನ ಹಿಂದೆ ಅಡಗುತ್ತಿದ್ದಳು...
ಅಮ್ಮ ಅವಳ ತಲೆಯನ್ನು ಬಲವಂತವಾಗಿ ಒರಸಲು ಬಂದಾಗ"
ಇದಿಷ್ಟೇ ಅವನು ಹೇಳಿದ್ದು...
ಅಷ್ಟು ಹೇಳಿ, ಅವನೂ ಕಳೆದುಹೋದ...
ತನ್ನ ಸವಿನೆನಪುಗಳಲ್ಲಿ......
ತನ್ನ ಆಲೋಚನೆಗಳಲ್ಲಿ......
ತನ್ನ ಮನೆಯ ಮೂಲೆಯಲ್ಲಿ..... ತುಂಬಾ ದೂರದಲ್ಲಿ...
ಅವಳ ಕೈಗೆ ಅದರದೇ ಮರ್ಜಿ ಬಂತೇನೋ.....
ಗಳಿಗೆಯಲ್ಲಿ ಅವಳ ಬಿಗಿ ಬೀಗದಿಂದ, ಕೂದಲು ಬಿಡಿಸಿಕೊಂಡಿತ್ತು.
.
.
.
.
.
.
ನವಿರಾದ ಮುಂಗುರೊಳೊಂದು ಕಚಗುಳಿಯಿಡುತ್ತಿದೆ...
ಗಾಳಿ ಅವಳ ರೇಷಿಮೆ ಕೂದಲೊಂದಿಗೆ ಆಟವಾಡುತ್ತಿದೆ...
ಅವಳು....
ಅವನೊಂದಿಗೆ, ಮುಸ್ಸಂಜೆಯಲ್ಲಿ, ಹೂದೋಟದಲ್ಲಿ...
ಸುಮ್ಮನೆ ನಕ್ಕುಬಿಡುತ್ತಾಳೆ,
ಅಂದಿನಿಂದ ಇಂದಿನವೆರೆಗೂ...
ಯಾರಿಗೂ ಅಗಿರಲಿಲ್ಲ...
ಅವನು ಬೀಗ ತೆಗೆದಿದ್ದಾದರೂ ಹೇಗೆ?!
ಅವಳ ಮನಸ್ಸಿನ ಬೀಗ ...
ಯಾವ ಕೈಯೂ, ಬುದ್ಧಿವಂತಿಕೆಯೂ ತೆಗೆಯಲಾಗದ ಬೀಗ
* * * * * *
ಮೂಲ ಪದ್ಯವನ್ನು ಓದಿ - http://geethascribbling.blogspot.com/2008/08/key.html. ಇದು ನನ್ನ ಮೊದಲ ಪ್ರಯತ್ನವಾದ್ದರಿಂದ ನಿಮ್ಮ ಕ್ರಿಟಿಕ್ಸ್ಗಾಗಿ ಕಾದಿದ್ದೇನೆ.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
6 ತಿಂಗಳುಗಳ ಹಿಂದೆ
ಆಹಹಹ! ಬಂದ್ಬಿಟ್ರಾ ಯಾರು ಕಮೆಂಟು ಬರ್ದಿರೋದು ಅಂತ ನೋಡೋಕೆ? ನೀವು ಬರೀರಿ ಮೊದಲು.
ಪ್ರತ್ಯುತ್ತರಅಳಿಸಿ(ಅಟ್ಲೀಸ್ಟ್ ಚೆನ್ನಾಗಿಲ್ಲ ಅಂತನಾದ್ರೂ ಬರೀರಿ.....
ಪ್ಲೀಸ್....................) (;)
ನಂಗೆ ಸ್ಯಾನೆ use useful
ಅಳಿಸಿchennagideyamma. Kannadadalli bareyona antha kaadukaadu software kaikottu englishnalle baritiddene.
ಪ್ರತ್ಯುತ್ತರಅಳಿಸಿKavana arthavaaguvudu svalpa kashta. Adaru bhaavanegalu dattavaagive. Navya kavanada saalige serisabahudeno ?
:)ho haga?
ಪ್ರತ್ಯುತ್ತರಅಳಿಸಿnanu adu vyartha prayatna vaaytu anta aasene bittu bittidde.
Englishina mula padyavannu odidira?
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿHello...
ಪ್ರತ್ಯುತ್ತರಅಳಿಸಿE kavana thumbaane chennaagiththu. Hinde omme haage kannu haayisis kavana thumba udda ide antha odade bittidde.... ivaththu odidaaga kavana thumba saraagavaagi Odisithu.
Moola kavanada aashayakke ondu chooru dhakke aagadanthe anuvaadisida reethi thumba hidisithu.
Nimma akkanigu nanna kadeyinda wishes, for writing such a nice poem and letting you to translate to kannada.
I am very sorry for replying to you very lately. Even i have faced the problem with fonts like you. I used to write in MS word using Nudi. If I open this artical in some PC in any cyber cafe, PC won't read kannada font. This is because baraha or Nudi is not installed in that system. In that case, you need to install baraha or Nudi software in your system.
Also please visit this webpage for more information:
http://sampada.net/fonthelp
this would help you.
If you are still not able to get the solution, please feel free to send me a mail to my email id: sudesh.shetty@hcl.in
ತುಂಬಾ ಥ್ಯಾಂಕ್ಸ್ ಸುಧೇಶ್, ನಿಮ್ಮ ರಿಪ್ಲೈಗೆ. ಪ್ರಯತ್ನಿಸಿ ನೋಡುತ್ತೇನೆ.
ಪ್ರತ್ಯುತ್ತರಅಳಿಸಿಇನ್ನು ನನ್ನ ಕವನದ ಬಗ್ಗೆ... ಉತ್ಪ್ರೇಕ್ಷೆ ಇಲ್ಲ ತಾನೆ? ಏನೇ ಆಗಲಿ ಹೊಗಳಿದರೆ ನನಗಂತೂ ತುಂಬ ಖುಷಿ.
ಹಾಗೆ ಸುಧೇಶ್ ಒಂದು ಕಮೆಂಟ್ ಡಿಲೀಟ್ ಮಾಡಿರೋದು ನೀವೆನಾ... ಅದರಲ್ಲಿ ಪದ್ಯದ ಬಗ್ಗೆ ನಿಜವಾದ ಅಭಿಪ್ರಾಯ ಇತ್ತೋ ಹೇಗೆ? [;)]
ಪ್ರತ್ಯುತ್ತರಅಳಿಸಿಹೌದು ಹೇಮಾ, ಅದನ್ನು ಡಿಲೀಟ್ ಮಾಡಿದ್ದು ನಾನೇ. ಮೊದಲು ಮಾಡಿದ ಕಮೆ೦ಟಿನಲ್ಲಿ ತು೦ಬಾ ತಪ್ಪುಗಳಾಗಿತ್ತು. ಕನ್ನಡವನ್ನು ಇ೦ಗ್ಲೀಷಿನಲ್ಲಿ ಬರೆದಿದ್ದೆ. ಅದಕ್ಕೆ ಅದನ್ನು ಡಿಲೀಟ್ ಮಾಡಿ, ನಿಮ್ಮ ಪ್ರಶ್ನೆಗೆ ಉತ್ತರವನ್ನು ಇ೦ಗ್ಲೀಷಿನಲ್ಲೇ ಬರೆದೆ. ನನ್ನ ಸಿಸ್ಟಮ್ ಕೈ ಕೊಟ್ಟಿತ್ತು. ಆದ್ದರಿ೦ದ ಹೊರಗಿನಿ೦ದ ಬರೆಯಬೇಕಾಯಿತು. ಅಲ್ಲಿ ಕನ್ನಡ ಸಿಗಲಿಲ್ಲ.
ಪ್ರತ್ಯುತ್ತರಅಳಿಸಿಕವನದ ಬಗ್ಗೆ ಹೇಳಿದ್ದು ಉತ್ಪ್ರೇಕ್ಷೆ ಖ೦ಡಿತಾ ಅಲ್ಲ. ನಿಮ್ಮದೇ ಕವನಕ್ಕೆ ಕಾಯ್ತಾ ಇದ್ದೇನೆ. ಹಾಗೆ ತು೦ಬಾ ಒಳ್ಳೆಯ ಕವನಗಳಿದ್ದರೆ, ಅನುವಾದಿಸಿ ಪೋಸ್ಟ್ ಮಾಡಿ. ನಿಮ್ಮಿ೦ದ ನಾವೂ ಓದಿದ ಹಾಗಾಗುತ್ತದೆ.
OK :)
ಪ್ರತ್ಯುತ್ತರಅಳಿಸಿಓದಿದೆ. ಮನಕ್ಕೆ ಹಾಕಿದ್ದ ಬೀಗ ತೆಗೆಯಲೆತ್ನಿಸಿದವರೆಗೆಲ್ಲಾ ಬಂದ ದಾರಿಗೆ ಸುಂಕವಿಲ್ಲವೆಂದು ಗೊತ್ತಾಯಿತು. ಅದ್ರೆ ಕೊನೆಯಲ್ಲಿ ಹೇಗೆ ಅವಳ ಭಾರ ಕಡಿಮೆಯಾಯಿತು, ಮತ್ತು ಅದಕ್ಕೆ ಕಾರಣ ಗೊತ್ತಾಗಲಿಲ್ಲ. ಬಿಡಿಸಿ ಹೇಳಿ !
ಪ್ರತ್ಯುತ್ತರಅಳಿಸಿಏನು ಹೀಗೆ ಹೇಳಿಬಿಟ್ರಿ? ಅಲ್ಲಿ ಬರುತ್ತಾನಲ್ಲ ಹುಡುಗ, ತನ್ನ ತಂಗಿಯ ಕಥೆ ಹೇಳಿಕೊಂಡು ಅವನೆ ಪ್ರಾಬ್ಲಮ್ ಸಾಲ್ವರ್!
ಪ್ರತ್ಯುತ್ತರಅಳಿಸಿಮನಸ್ಸಿನ ಬೀಗ, ತಗೆದು ಯೋಚನೆಗೆ ಹಾಕಬೇಕಿಗ.. ಚೇನ್ನಾಗಿದೆ...👌👌👌
ಪ್ರತ್ಯುತ್ತರಅಳಿಸಿ