ಶುಕ್ರವಾರ, ಏಪ್ರಿಲ್ 11, 2008

ರಸ್ತೆಯಲ್ಲಿ

ಬಿರಬಿರನೆ ನಡೆಯುತ್ತಿದ್ದ ನನಗೆ
ಅವನು ಹಿಂದೆಬರುತ್ತಿದ್ದುದು ತಿಳಿದು
ಕಾಲೆಳೆಯಿತು......

ನನ್ನ ಕಂಡೋ ಏನೋ ಅವಗೆ
ಕಣ್ಣು ನೆಟ್ಟು, ರಭಸ ಇಳಿದು,
ನಿಧಾನ ನಡೆಯಿತು......

ಇಬ್ಬರೂ ಒಟ್ಟಿಗೆ ಹೊರಟೆವು
ದಾರಿ ಸಾಗಿತು
ಗುರಿತಲುಪಿತು
ಆದರೆ, ವಿಪರ್ಯಾಸ
ಆಟೋದಿಂದ ಇಳಿವಾಗ ಚಿಲ್ಲರೆಗಾಗಿ
ಜಗಳವಾಡಬೇಕಾಯಿತು!!!!!!

[:)]

11 ಕಾಮೆಂಟ್‌ಗಳು:

  1. ಹಾ ಹಾ ಹಾ ... ಕವನ ಬಹಳ ಚೆನ್ನಾಗಿದೆ ಮನ ಮುದಗೊಂಡಿತು

    ಪ್ರತ್ಯುತ್ತರಅಳಿಸಿ
  2. ನಿದ್ರೆ ಬರದೇ ಅ೦ತರಪಿಶಾಚಿ ತರಹ ಬೆಳಗ್ಗೆ ೪.೦೦ ಗ೦ಟೆಗೆ ಎದ್ದು ಬ್ಲಾಗ್ಸ್ ಓದುತ್ತಿದ್ದೇನೆ. ನಿಮ್ಮಈ ಕವನ ಮುಗುಳ್ನಗು ಮೂಡಿಸಿತು.
    ಥ್ಯಾ೦ಕ್ಸ್ ನಗು ಮೂಡಿಸಿದ್ದಕ್ಕೆ.

    ಪ್ರತ್ಯುತ್ತರಅಳಿಸಿ
  3. ಹಹ... ನಿದ್ರೆ ಯಾಕೆ ಬರಲಿಲ್ಲ? ಅಂದಹಾಗೆ ನೀವು ಓರ್ಕುಟ್ ನಲ್ಲಿ ಇದ್ದೀರ?

    ಪ್ರತ್ಯುತ್ತರಅಳಿಸಿ
  4. ಆಟೋದವನು ಜಗಳಕ್ಕೆ ಬರಲಿಲ್ಲವೇ?? !
    ತುಂಬಾ ಚನ್ನಾಗಿ ಬರೆದಿದ್ದೀರಿ..

    ಪ್ರತ್ಯುತ್ತರಅಳಿಸಿ
  5. ನೀವು ಆಟೊದಲ್ಲಿ ಹೋಗಬಾರದಿತ್ತು. ಛೇ !
    [ನಿಜ್ಜಾ ಅನುಭವಾನಾ?!!]

    ಶಿವು.ಕೆ

    ನನ್ನ ಬ್ಲಾಗಿನಲ್ಲಿ ಮಲ್ಲೇಶ್ವರಂ ರೈಲ್ವೇ ನಿಲ್ದಾಣ ಓದಿ ಇಂತ ಝಲಕ್ ಇನ್ನು ಸಿಗಬಹುದು.

    ಪ್ರತ್ಯುತ್ತರಅಳಿಸಿ
  6. ನಿಜ ಅನುಭವ ಅಲ್ಲ ಶಿವು ಅವರೆ, ಅಪ್ಪಿನಲ್ಲಿ ನಡೆದು ಹೋಗುತ್ತಿದ್ದಾಗ ಯಾವುದೋ ಒಂದು ಆಟೋ ಹಿಂದೆ ನಿಧಾನಕ್ಕೆ ಬಂದ ಹಾಗಾಯಿತು ಅಷ್ಟೆ.

    ಪ್ರತ್ಯುತ್ತರಅಳಿಸಿ
  7. ಸಕತ್ ಲವ್ ಇಸ್ಟೋರಿ ಅಂದುಕೊಂಡು ಹಂಗೆ ಓದ್ಕೋತ ಹೋದೆ..ಆದರೆ ಕೊನೇ ಪ್ಯಾರದಲ್ಲಿ ನಿರಾಸೆ ಮಾಡಿಬಿಟ್ರಿ..ಆದರೇ ತುಂಬಾ ನಕ್ಕುಬಿಟ್ಟೆ..ಸೊಗಸಾಗಿದೆ ಕವನ..ಅಂದ ಹಾಗೆ ನೀವು ಆಂದ ಹಾಗೆ ನಿಮಗೆ ಆಟೋರಾಣಿ ಅಂತ ಯಾಕೆ ಹೆಸರಿಟ್ಟುಕೊಂಡಿರಿ? ಶಂಕರ್ ನಾಗ್ ಅಭಿಮಾನಿ ಶಂಕರ್ ನಾಗಿ ನ ನೀವು?

    ನಮ್ಮ ನವಿಲುಗರಿ ಮನೆ ಕಡೆ ಅವಗವಾಗ ಬಂದು ಹೋಗ್ತಿರಿ:)

    www.navilagari.wordpress.com

    ಪ್ರತ್ಯುತ್ತರಅಳಿಸಿ
  8. ಆಟೋರಾಣಿ ನನ್ನ ಸ್ನೇಹಿತರು ಇಟ್ಟ ಹೆಸರು, ಇಂತ ಪ್ರಸಂಗಗಳಿಂದ ಪ್ರೇರಿತರಾಗಿ!

    ಪ್ರತ್ಯುತ್ತರಅಳಿಸಿ