ಶನಿವಾರ, ಡಿಸೆಂಬರ್ 6, 2014

ನಾನು

ನಾನೊಂದು ಹರಿಯುವ ನದಿ!
ನನಗಿಲ್ಲ ದೊಣ್ಣೆನಾಯಕನಪ್ಪಣಿ!

ನನ್ನ ಲಕ್ಷ್ಯವಿಹುದಲ್ಲಿ!
ಮುತ್ತುಗಳಿಗೆ ಮುತ್ತಿಡುವಲ್ಲಿ!!

ಬೆಟ್ಟವ ಹತ್ತು, ಬಣ್ಣವ ಹಚ್ಚು,
ತಡೆ, ತಡೆ ನಿಲ್ಲು!

ಅರೆ! ನೀವು ಬೊಬ್ಬಿರಿದೇನು ಫಲ!
ಸಿಗಬಹುದೇನೋ ನಿಮಗೊಂದು ಸಾಧನೆಯೆಂಬ ಅಮಲ!

ನಾ ನಿಲ್ಲುವಳಲ್ಲ, ಕಾಲಿಲ್ಲ! 
ಓ ಕೇಳಲಿಲ್ಲ ನಿಮ್ಮ ಧ್ವನಿ, ಕಿವಿಯಿಲ್ಲ!

ನಾನೊಂದು ಹರಿಯುವ ನದಿ!
ನನಗಿಲ್ಲ ದೊಣ್ಣೆನಾಯಕನಪ್ಪಣಿ!